പ്രമാണം:Indepencence day celebration on 15-08-2022.jpg

Schoolwiki സംരംഭത്തിൽ നിന്ന്

പൂർണ്ണ വലിപ്പം(1,920 × 1,920 പിക്സൽ, പ്രമാണത്തിന്റെ വലിപ്പം: 2.83 എം.ബി., മൈം തരം: image/jpeg)

ಎ .ಎಲ್ .ಪಿ . ಶಾಲೆ ಇಚ್ಲಂಗೋಡು ಜನರಲ್

ಸ್ವಾತಂತ್ರ್ಯ ದಿನಾಚರಣೆ 

15.08.2022 ಸೋಮವಾರ

ಭಾರತದ 76 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಎ.ಎಲ್.ಪಿ.ಎಸ್ ಇಚ್ಲಂಗೋಡು ಜನರಲ್ ಶಾಲೆಯಲ್ಲಿ  ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
             ಬೆಳಗ್ಗೆ  9.45ಕ್ಕೆ ಸರಿಯಾಗಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಹರೀಶ ಇವರು ಅಸೆಂಬ್ಲಿಯಲ್ಲಿ  ಧ್ವಜಾರೋಹಣ ಗೈದರು. ಅಸೆಂಬ್ಲಿಯ‌ ಬಳಿಕ ಭಾರತಾಂಬೆಯ ಜೊತೆಗೆ ಮಕ್ಕಳ ಮೆರವಣಿಗೆಯನ್ನು ನಡೆಸಲಾಯಿತು.
  10.30 ಕ್ಕೆ ಸರಿಯಾಗಿ ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಸಭಾಕಾರ್ಯಕ್ರಮವು ಆರಂಭವಾಯಿತು. ಸಭೆಯ ಅಧ್ಯಕ್ಷ ಸ್ಥಾನವನ್ನು  ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ದಿವಾಕರ ಆಳ್ವ ಇವರು ವಹಿಸಿದ್ದರು. ವಾರ್ಡ್ ಮೆಂಬರ್ ಶ್ರೀಮತಿ  ಝುಹಾರ ಇವರು  ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು‌.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲಯನ್ಸ್ ಕ್ಲಬ್ ಮಂಜೇಶ್ವರ ಉಪ್ಪಳ ಇದರ ಅಧ್ಯಕ್ಷರಾದ ಶ್ರೀ ಲಯನ್ ಲಕ್ಷ್ಮಣ್ ಕುಂಬಳೆ ಹಾಗೂ  ಕಾರ್ಯದರ್ಶಿಯಾದ ಲಯನ್ ಅಶೋಕ್ ಇವರು ಸಭೆಯನ್ನು ಉದ್ದೇಶಿಸಿ ಮಾಡನಾಡಿದರು. ಲಯನ್ಸ್ ಕ್ಲಬ್ ಮಂಜೇಶ್ವರ ಉಪ್ಪಳ ಇದರ ವತಿಯಿಂದ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ಕೊಡೆ ವಿತರಣೆ ಮತ್ತು ಶಾಲಾ ಅಭಿವೃದ್ಧಿಗೆ ಸಹಾಯಹಸ್ತವನ್ನು ನೀಡಿದರು.ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರು ಶ್ರೀ ಬೋಜ ಮಾಸ್ಟರ್,ಮಾಜಿ ವಾರ್ಡು ಸದಸ್ಯೆ ಶ್ರೀಮತಿ ಜಯಂತಿ ಶೆಟ್ಟಿ , ಶಾಲಾ ರಕ್ಷಕ- ಶಿಕ್ಷಕ ಸಂಘದಅಧ್ಯಕ್ಷರಾದ ಶ್ರೀ ಹರೀಶ್, ಶಾಲಾ ಮಾತೃ

ಮಂಡಳಿಯ ಅಧ್ಯಕ್ಷೆ ಶ್ರೀಮತಿ ಅಮಿತಾ, ಶಾಲಾ SSG ಯ ಅಧ್ಯಕ್ಷರಾದ ಶ್ರೀ ಮೌನೇಶ ಆಚಾರ್ಯ, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ರಾಧಾಕೃಷ್ಣ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುಧೀಶ್ಚಂದ್ರ ಶೆಟ್ಟಿ ಇವರು ಶುಭಾಶಂಸನೆಗೈದರು.

            ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ ನಡೆಸಿದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.   ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಶಾಲಾ ಮಕ್ಕಳು ದೇಶಭಕ್ತಿ ಗೀತೆಗಳನ್ನು  ಹಾಡಿದರು ಹಾಗೂ ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕಿ ನೃತ್ಯ ಮಾಡಿ ನೋಡುಗರ ಮನ ಸೆಳೆದರು.
ಶಾಲಾ ಹಿರಿಯ ಅಧ್ಯಾಪಿಕೆ ಶ್ರೀಮತಿ ಭಾರತಿ ಟೀಚರ್ ಇವರು ಕಾರ್ಯಕ್ರಮಕ್ಕೆ‌ ಎಲ್ಲರನ್ನು ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಜಯರಾಮ ಮಾಸ್ಟರ್ ಇವರು ಧನ್ಯವಾದವನ್ನು ಅರ್ಪಿಸಿದರು. ಶಾಲಾ ಅಧ್ಯಾಪಕರಾದ ಶ್ರೀ ಕೃಷ್ಣ  ಮೋಹನ ಮಯ್ಯ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನೀಡಿರುವ  ಸಿಹಿತಿಂಡಿಗಳನ್ನು ಎಲ್ಲರಿಗೂ ಹಂಚಲಾಯಿತು.

പ്രമാണ നാൾവഴി

ഏതെങ്കിലും തീയതി/സമയ കണ്ണിയിൽ ഞെക്കിയാൽ പ്രസ്തുതസമയത്ത് ഈ പ്രമാണം എങ്ങനെയായിരുന്നു എന്നു കാണാം.

തീയതി/സമയംലഘുചിത്രംഅളവുകൾഉപയോക്താവ്അഭിപ്രായം
നിലവിലുള്ളത്11:59, 28 മാർച്ച് 202311:59, 28 മാർച്ച് 2023-ലെ പതിപ്പിന്റെ ലഘുചിത്രം1,920 × 1,920 (2.83 എം.ബി.)11226wiki (സംവാദം | സംഭാവനകൾ)

താഴെ കാണുന്ന താളിൽ ഈ ചിത്രം ഉപയോഗിക്കുന്നു:

"https://schoolwiki.in/index.php?title=പ്രമാണം:Indepencence_day_celebration_on_15-08-2022.jpg&oldid=1897581" എന്ന താളിൽനിന്ന് ശേഖരിച്ചത്