പ്രമാണം:Yoga day celebration on 21-06-2022.jpg

Schoolwiki സംരംഭത്തിൽ നിന്ന്

പൂർണ്ണ വലിപ്പം(1,920 × 1,080 പിക്സൽ, പ്രമാണത്തിന്റെ വലിപ്പം: 697 കെ.ബി., മൈം തരം: image/jpeg)

ಎ.ಎಲ್.ಪಿ.ಶಾಲೆ ಇಚ್ಲಂಗೋಡು ಜನರಲ್ ಯೋಗ ದಿನಾಚರಣೆ

             ಇಚ್ಲಂಗೋಡು: ತಾರೀಕು 21-06-2022ನೇ ಮಂಗಳವಾರದಂದು ಎ.ಎಲ್.ಪಿ.ಎಸ್. ಇಚ್ಲಂಗೋಡು ಜನರಲ್ ಶಾಲೆಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.ಪ್ರತಿ ವರ್ಷ ಅಂತರಾಷ್ಟ್ರೀಯ ಯೋಗ ದಿನವನ್ನು ಜೂನ್ 21 ರಂದು ಆಚರಿಸಲಾಗುತ್ತದೆ. ಶಾಲಾ ಮಕ್ಕಳಿಗೆ ಯೋಗದ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವುದಕ್ಕಾಗಿ  ಯೋಗ ತರಬೇತುದಾರರು ಶ್ರೀ ಜಗದೀಶ ಪ್ರತಾಪನಗರ ಅವರು ಯೋಗ ಮಾಡಿ ತೋರಿಸುವುದರ ಮೂಲಕ ಈ  ದಿನಾಚರಣೆಯನ್ನು ಶಾಲೆಯಲ್ಲಿ  ಆಚರಿಸಲಾಯಿತು.
            ಬೆಳಗ್ಗೆ 10.30 ಕ್ಕೆ ಸರಿಯಾಗಿ ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಜಯರಾಮ.ಸಿ.ಎಚ್ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸುತ್ತಾ  ಯೋಗದ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು.   ಈ ಕಾರ್ಯಕ್ರಮವನ್ನು ಶಾಲಾ ಆಡಳಿತ ಸಮಿತಿಯ ಸದಸ್ಯರಾದ ಶ್ರೀ ರಾಧಾಕೃಷ್ಣನ ಅಕ್ಕಾರಿಹಿತ್ಲು ಉದ್ಘಾಟಿಸುತ್ತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಶಾಲಾ ಹಿರಿಯ ಅಧ್ಯಾಪಿಕೆ ಶ್ರೀಮತಿ ಭಾರತಿ ಟೀಚರ್ ಅವರು ಯೋಗದ ಮಹತ್ವದ ಬಗ್ಗೆ ಹೇಳುತ್ತಾ ಸರಳ ಯೋಗಗಳನ್ನು ಮಾಡಬೇಕು ಎಂದು ಮಕ್ಕಳಿಗೆ ತಿಳಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಯೋಗ ತರಬೇತುದಾರರು ಶ್ರೀ ಜಗದೀಶ ಪ್ರತಾಪನಗರ ಇವರು  ಮಕ್ಕಳಲ್ಲಿ ಯೋಗ ಅಭ್ಯಾಸಗಳನ್ನು ಮಾಡುತ್ತಾ ಉತ್ತಮ ಸಾಧನೆಯನ್ನು ಗೈಯಬೇಕು ಎಂದು ಹೇಳುತ್ತಾ ಸರಳ ಯೋಗ ತರಬೇತಿಯನ್ನು ಮಕ್ಕಳಿಗೆ  ನೀಡಿದರು. 
   ಶಾಲಾ ಅಧ್ಯಾಪಿಕೆ ಕುಮಾರಿ ದೀಕ್ಷಿತ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಶಾಲಾ ಅಧ್ಯಾಪಕರು ಶ್ರೀ ಕೃಷ್ಣ ಮೋಹನ ಮಯ್ಯ ಅವರು ಕಾರ್ಯಕ್ರಮಕ್ಕೆ ಧನ್ಯವಾದವನ್ನು ಅರ್ಪಿಸಿದರು.  ಇದೇ ಸಂದರ್ಭದಲ್ಲಿ ಯೋಗ ತರಬೇತುದಾರರಿಗೆ ಶಾಲಾ ಮುಖ್ಯೋಪಾಧ್ಯಾಯರು ಸ್ಮರಣಿಕೆಯನ್ನು ನೀಡಿದರು.

പ്രമാണ നാൾവഴി

ഏതെങ്കിലും തീയതി/സമയ കണ്ണിയിൽ ഞെക്കിയാൽ പ്രസ്തുതസമയത്ത് ഈ പ്രമാണം എങ്ങനെയായിരുന്നു എന്നു കാണാം.

തീയതി/സമയംലഘുചിത്രംഅളവുകൾഉപയോക്താവ്അഭിപ്രായം
നിലവിലുള്ളത്11:49, 28 മാർച്ച് 202311:49, 28 മാർച്ച് 2023-ലെ പതിപ്പിന്റെ ലഘുചിത്രം1,920 × 1,080 (697 കെ.ബി.)11226wiki (സംവാദം | സംഭാവനകൾ)

താഴെ കാണുന്ന താളിൽ ഈ ചിത്രം ഉപയോഗിക്കുന്നു:

മെറ്റാഡാറ്റ

"https://schoolwiki.in/index.php?title=പ്രമാണം:Yoga_day_celebration_on_21-06-2022.jpg&oldid=1897571" എന്ന താളിൽനിന്ന് ശേഖരിച്ചത്