എസ്.വി. വി.എച്ച്. കൊഡലമോഗർ/അക്ഷരവൃക്ഷം/ ಕೋರೋನ ರಜೆ

Schoolwiki സംരംഭത്തിൽ നിന്ന്
ಕೋರೋನ ರಜೆ

  

ಎಲ್ಲೆಲ್ಲೂ ಭಯ ಹೊಂದಿರುವ ವಾತಾವರಣಗಳು
ಸುರಕ್ಷೆಗೆ ಮುಖಕ್ಕೆ ಅಂಟಿರುವ ಮಾಸ್ಕುಗಳು
ಮನೆಯಿಂದ ಹೊರಹೋಗದ ಕಾರು ಬೈಕುಗಳು
ಬೇಸತ್ತು ಹೋಗಿದೆ ಈ ಕೋರೋನ ರಜೆಗಳು

ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ ರೋಗಿಗಳು
ಶರಣಾಗಿ ಹೋಗಿವೆ ಅನೇಕ ದೇಶಗಳು
ಬದುಕಿ ಉಳಿಯಲು ಪಾಲಿಸಿ ಸರಕಾರದ ಷರತ್ತುಗಳು
ಸಾಬೂನು ಬಳಸಿ ತೊಳೆಯಿರಿ ನಿಮ್ಮ ಕೈಗಳು

ಜೀವವನ್ನು ಪಣಕಿಟ್ಟು ದುಡಿಯುವ ಡಾಕ್ಟರ್ ನರ್ಸುಗಳು
ಬಾಗಿಲು ತೆರೆಯದ ಅಂಗಡಿ ಮಳಿಗೆಗಳು
ರೋಗಿಗಳಿಗೂ ತೆರೆಯದ ನೆರೆ ರಾಜ್ಯದ ಗಡಿಗಳು
ದೇವರೇ...ನನಗರ್ಥವಾಗುತಿಲ್ಲ ನಿನ್ನ ನಿಯಮಗಳು

ಸೋಲದು ಕೋರೋನ ನಿನ್ನಿಂದ ನಮ್ಮ ಮನಸುಗಳು
ಬಲುಬೇಗ ಚೇತಾರಿಸಲಿವೆ ನಮ್ಮ ಎಲ್ಲಾ ರಾಜ್ಯಗಳು
ಬಂದೇ ಬರುವುದು ನಮಗೆ ನೆಮ್ಮದಿಯ ದಿನಗಳು
ಬಿಡಲಾರರು ನಮ್ಮ ಕೈಯ ನಾವು ನಂಬುವ ದೇವರುಗಳು

KUMARI THRSHA
9 D എസ്.വി. വി.എച്ച്. കൊഡലമോഗർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Manu Mathew തീയ്യതി: 05/ 05/ 2020 >> രചനാവിഭാഗം - കവിത