എസ്. എ.ടി.എച്ച്.എസ്. മഞ്ചേശ്വർ/CENTEENARY YEAR PROGRAMME

Schoolwiki സംരംഭത്തിൽ നിന്ന്
  • ಶತಮಾನೋತ್ಸವದ ಸಂಭ್ರಮದಲ್ಲಿ ಮಂಜೇಶ್ವರದ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಶ್ರೀಮತ್ ಅನಂತೇಶ್ವರ ದೇವಳದ ಶಾಲೆ.
  • 2025 ಮೇ ತಿಂಗಳಲ್ಲಿ ಬೃಹತ್ ಕಾರ್ಯಕ್ರಮ ನಡೆಸಲು ನಿರ್ಧಾರ.
  • ಶತಮಾನೋತ್ಸವದ ಲಾಂಛನ ಬಿಡುಗಡೆ ಹಾಗೂ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಪೂರ್ವಭಾವಿ ಸಿದ್ಧತಾ ಸಭೆ.

ಶತಮಾನೋತ್ಸವದ ಲಾಂಛನ ಬಿಡುಗಡೆ


           2024-25 ರ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಹಳ ವಿಜೃಂಭಣೆಯಿಂದ ಶತಮಾನೋತ್ಸವ ಕಾರ್ಯಕ್ರಮ ಜರಗಲಿದ್ದು ಇದರ ಮೊದಲ ಭಾಗವಾಗಿ 'ಲಾಂಛನ' ಬಿಡುಗಡೆ ಕಾರ್ಯಕ್ರಮ ದಿನಾಂಕ 9.04.2025ರಂದು ಶ್ರೀಮದ್ ಅನಂತೇಶ್ವರ ದೇವಳದ ವಸಂತ ಮಂಟಪದಲ್ಲಿ ಜರಗಿತು.ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಟಿ.ಗಣಪತಿ ಪೈಯವರು ಶತಮಾನೋತ್ಸವದ ಲಾಂಛನ ಅನಾವರಣ ಗೊಳಿಸಿದರು.

       ದೇವಳದ ಖಜಾಂಚಿ ಪ್ರಶಾಂತ್ ಪೈ, ಶಾಲಾ ಮ್ಯಾನೇಜರ್ ಪ್ರಶಾಂತ್ ಹೆಗ್ಡೆ, ಶಾಲಾ ಕರೆಸ್ಪಾಂಡೆಂಟ್ ನಿತಿನ ಚಂದ್ರ ಪೈ, ದೇವಳದ ಮ್ಯಾನೇಜರ್ ರಾಹುಲ್ ಕಾಮತ್, ಮಂಜೇಶ್ವರ ಪೇಟೆಯ ಪ್ರತಿನಿಧಿ ದೇವದಾಸ ಪ್ರಭು, ಮಂಜೇಶ್ವರ ಜಿ.ಎಸ್.ಬಿ ಸಂಘದ ಅಧ್ಯಕ್ಷರಾದ ಪ್ರಸಾದ್ ಪ್ರಭು, ಶಾಲಾ ಎಲ್ ಪಿ ವಿಭಾಗದ ಮುಖ್ಯೋಪಾಧ್ಯಾಯರಾದ ತೇಜೇಶ್ ಕಿರಣ್, ಶಾಲೆಯ ಅಧ್ಯಾಪಕ ವೃಂದ, ಶಿಕ್ಷಕ ವೃಂದದ ಕಾರ್ಯದರ್ಶಿ ಕಿರಣ್ ಕುಮಾರ್,ಶಾಲೆಯ ಅಧ್ಯಾಪಕ ವೃಂದ, ಅರ್ಚಕ ವೃಂದ, ದೇವಳದ ಆಚಾರ್ಯರು ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು. ಶ್ರೀಮತಿ ಗ್ರೀಷ್ಮಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.