എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ/അക്ഷരവൃക്ഷം/ ಪರಿಸರ ಶುಚಿತ್ವದಲ್ಲಿ ನನ್ನ ಪಾತ್ರ

Schoolwiki സംരംഭത്തിൽ നിന്ന്
ಪರಿಸರ ಶುಚಿತ್ವದಲ್ಲಿ ನನ್ನ ಪಾತ್ರ


'ಪರಿಸರ  ಹಾನಿ' ಇದು ತೀರಾ  ಇತ್ತೀಚೆಗೆ  ಕೇಳಿ  ಬರುವ  ಸುದ್ದಿಯಾಗಿದೆ. ಮಾನವನ  ದುರಾಸೆ, ದುರ್ಬುದ್ಧಿಗಳಿಗೆ  ಮಿತಿಯಿಲ್ಲವಾಗಿದೆ.  ಪರಿಸರ  ಇಂದು  ಅವನತಿಯತ್ತ  ಸಾಗಿ  ಮಾನವ  ಕುಲವನ್ನೇ  ವಿನಾಶದ  ಅಂಚಿಗೆ  ತಳ್ಳುತ್ತಿದೆ.  ಮಾನವ  ತನ್ನ ಅಲ್ಪ  ಲಾಭಕ್ಕಾಗಿ ಇಡೀ  ಮಾನವ ಕುಲದ  ಸಂಹಾರಕ್ಕೆ ಸಿದ್ಧನಾಗಿ  ನಿಂತಿದ್ದಾನೆ. ಇದಕ್ಕೆ  ಕಡಿವಾಣ  ಹಾಕದಿದ್ದರೆ,  ನಾವೆಲ್ಲ  ಒಂದು  ದಿನ  ಭಾರೀ  ಬೆಲೆತೆರಬೇಕಾಗುವುದು. 
'ಪರಿಸರ' ಇದಕ್ಕೆ  ವಿಶಾಲ  ಅರ್ಥವಿದೆ. ಮನುಷ್ಯನ  ಸುತ್ತೆಲ್ಲಾ  ಏನೆಲ್ಲಾ  ಇದೆಯೋ  ಅದೆಲ್ಲಾ  ಪರಿಸರವೇ  ಗಿಡ, ಮರ , ಪಶು, ಪಕ್ಷಿ, ನದಿ, ಕೊಳ,   ಸಮುದ್ರ, ಪರ್ವತ, ಭೂಮಿ  ಗಾಳಿ, ಜೀವಿಗಳು ಇವೆಲ್ಲಾ ಪರಿಸರ ವ್ಯಾಪ್ತಿಯಲ್ಲಿ  ಬರುವುಗಳಾಗಿವೆ. ಪರಿಸರ ವ್ಯವಸ್ಥೆಯ  ಒಂದು ಅಂಶವೇ  ಮನುಷ್ಯನಾಗಿರುವನು.  ಸರಕಾರದ ಕಾನೂನುಗಳಿಂದ ಜನರಲ್ಲಿ  ಪ್ರಜ್ಞೆ  ಬರಬೇಕಿದೆ.  ಆದರೆ  ಅದು  ಬರುವ  ಯಾವ ಸೂಚನೆಗಳು  ಕಂಡುಬರದಿರುವುದು  ದೌರ್ಭಾಗ್ಯ  . 
ಮಾನವನ  ದುರಾಶೆಯಿಂದ  ವಾಯು  ಮಾಲಿನ್ಯ, ಜಲಮಾಲಿನ್ಯ ಶಬ್ದಮಾಲಿನ್ಯಗಳ  ಕಾರಣ ಮುಂದಿನ  ಜನಾಂಗಕ್ಕೆ  ವಿನಾಶದ ರುಚಿಯನ್ನು ತೋರಿಸುವಂತಾಗಿದೆ. 
ಕೈಗಾರಿಕೋದ್ಯಮಗಳು  ಬೆಳೆದು, ಅವು  ಇಂದು ನಗರ ಮಧ್ಯದಲ್ಲಿ  ಬೆಳೆಯುತ್ತಿರುವುದರಿಂದ  ವಾಯುಮಾಲಿನ್ಯದ  ಪ್ರಮಾಣ  ಹೆಚ್ಚು  ಏರಿಕೆಯಾಗಿದೆ. ಮಲಿನಯುಕ್ತ  ನೀರನ್ನು  ನದಿಗೆ  ಬಿಡುವುದರಿಂದ  ಪರಿಸರ  ನಾಶವಾಗುತ್ತಿದೆ.  ಇದರಿಂದ ವನ್ಯ ಜೀವಿಗಳ  ಸಂತತಿ  ಇಲ್ಲವಾಗಬಹುದು.  ಕಾಡನ್ನು ಬೆಳೆಸಬೇಕೆಂಬ  ಪ್ರಜ್ಞೆ ಸದಾ ನಾಶವಾಗುತ್ತಿದೆ.ಇದರಿಂದ ಶುದ್ಧ ವಾಯು ಪೂರೈಕೆ ಅಲಭ್ಯವಾಗುತ್ತಿದೆ ಬೋಪಾಲ್ ನಗರದ ವಿಷ ಅನಿಲ ದುರಂತ ನಮ್ಮ ಕಣ್ಣಮುಂದೆ ಪ್ರತ್ಯಕ್ಷ  ಸಾಕ್ಷಿಯಾಗಿ ನಿಂತಿದೆ. ಎಷ್ಟೋ ವರ್ಷಗಳ ಅಂದಿನ ದುರಂತದ ಕರಾಳ ಛಾಯೆ. ಇಂದಿಗೂ ಅಲ್ಲಿ ಜನರ ಬದುಕನ್ನು ಅತಂತ್ರವಾಗಿಸಿದೆ.ರಾಸಾಯನಿಕ ಸೋರಿಕೆಯ ಘೋರ ಕೃತ್ಯ ತಲ್ಲಣಗೊಳಿಸಿದೆ.ಅದರಂತೆ ಹರಿಹರ ಪಾಲಾಫೇಬರ್ ಘಟಕ ಹೊರಸೂಸುವ ವಿಷ ಅನಿಲದಿಂದ ಪರಿಸರ ಹಾಳಾಗುತ್ತಿದೆ. ಆದರೆ ಎಲ್ಲಿಯೂ ಪ್ರತಿಭಟನೆಯಿಂದ ಪ್ರಯೋಜನವಾಗುತ್ತಿಲ್ಲ. 
ಇನ್ನು  ಶುಚಿತ್ವದ ಕಡೆಗೆ ಗಮನ ನೀಡದಿರುವದು ಸಹ ಅಷ್ಟೇ ಮುಖ್ಯ. ಮನೆ, ವಾಣಿಜ್ಯ ಸಂಸ್ಥೆಗಳು,ಹೋಟೆಲ್ ಇವುಗಳಿಂದ  ಬರುವ ನಿರುಪಯುಕ್ತ ಮಲಿನ ವಸ್ತುಗಳನ್ನು ಎಲ್ಲಂದರಲ್ಲಿ ಚೆಲ್ಲಿ ರೋಗಗಳ ಪ್ರಸರಣಕೆ ಅನುಕೂಲಕಲ್ಪಿಸುವುದು. ಅದರಿಂದ ಆರೋಗ್ಯಕೆ ಹಾನಿಯಾಗುವುದು. ಗಾಳಿ ಅಶುದ್ಧವಾಗಿರುವುದರಿಂದ ಭೀಕರ ಅನಾಹುತವಾಗುವುದು. ಶಬ್ದ ಮಾಲಿನ್ಯದಿಂದ  ಮಾನಸಿಕ ರೋಗಗಳು ಇಂದು ಹೆಚ್ಚಾಗುತ್ತಿವೆ.ವಾಹನಗಳಿಂದ ಹೊರಸೂಸುವ ಹೊಗೆ ಶಬ್ದ ಮಾಲಿನ್ಯ ಹೆಚ್ಚಾಗಲು ಕಾರಣವಾಗುತ್ತಿದೆ.ನದಿಯಲ್ಲಿ ಸ್ನಾನ ಮಾಡುವುದರಿಂದ, ದನಗಳನ್ನು ತೊಳೆಯುವುದರಿಂದ, ಬಟ್ಟೆ ಒಗೆಯುವುದರಿಂದ  ನೀರು ಮಲಿನವಾಗುತ್ತಿದೆ.ಅಲ್ಲದೆ  ಕೈಗಾರಿಕೆಗಳು  ನದಿಗಳಿಗೆ ಬಿಡುವ ಮಾಲಿನ್ಯಗಳು ಕೂಡ ನೀರನ್ನು ಮಲಿನ ಮಾಡುವಲ್ಲಿ ಪ್ರಧಾನ ಪಾತ್ರವಹಿಸಿವೆ. ಇದರಿಂದ ಸಾಂಕ್ರಾಮಿಕ  ರೋಗಗಳು ಹರಡುತ್ತವೆ. 
ಹೀಗೆ ಮಾನವ ನಿಸರ್ಗದ  ಮೇಲೆ ಅನಾವಶ್ಯಕವಾಗಿ ಧಾಳಿ ನಡೆಸುವುದರಿಂದ ಪರಿಸರಕ್ಕೆ  ಧಕ್ಕೆ ಉಂಟಾಗುತ್ತದೆ. ಇದಕ್ಕೆ ಸರಕಾರವು ಅನೇಕ ಕಟ್ಟುನಿಟ್ಟಿನ  ನಿಯಮಗಳನ್ನು ಜಾರಿಗೆ   ತರುತ್ತಿವೆ. ಜೊತೆಗೆ ಜನರಲ್ಲಿಯೂ ಪರಿಸರ, ಪ್ರಜ್ಞೆ, ಜಾಗೃತಿ ಅವಶ್ಯವಿರುವುದು. ಇದನ್ನು ನಿರ್ಲಕ್ಷಸಿದರೆ ಮಾನವನ ವಿನಾಶ ಖಂಡಿತ. ಪರಿಸರ ಹಾನಿಯಿಂದಲೇ ರೋಗಗಳು ಉಲ್ಬಣಿಸುತ್ತವೆ. ಇದರಿಂದಾಗಿ ಪರಿಸರ ಸಂರಕ್ಷಣೆ  ನಮೆಲ್ಲರ ಕರ್ತವ್ಯವಾಗಿದೆ. ಇದರೊಂದಿಗೆ ನಾವೆಲ್ಲರೂ ನಮ್ಮ ಮನೆ, ಸುತ್ತುಮುತ್ತಲಿನ ಪರಿಸರ, ಸಮಾಜ  ಇತ್ಯಾದಿಗಳನ್ನು ಶುಚಿಯಾಗಿರಿಸಬೇಕು. ಪರಿಸರವನ್ನು ಸ್ವಚ್ಛತೆಯಿಂದ ಇರಿಸುವುದು ಭೂಮಿ ತಾಯಿಗೆ ಗೌರವ ಸಲ್ಲಿಸುವಂತಾಗುತ್ತದೆ. 




VENISHA D'SOUZA
5 A എസ് എസ് എ യു പി എസ് ഷേണി ಎಸ್.ಎಸ್.ಎ.ಯು.ಪಿ.ಎಸ್.ಶೇಣಿ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം

 സാങ്കേതിക പരിശോധന - Nixon C. K. തീയ്യതി: 05/ 05/ 2020 >> രചനാവിഭാഗം - ലേഖനം