എസ് .ഡി. പി. എച്ച്. എസ്. ധർമ്മത്തടുക്ക/അക്ഷരവൃക്ഷം/ ಇಂದು ಮಕ್ಕಳು ಮುಂದೆ ಹಿರಿಯರು

Schoolwiki സംരംഭത്തിൽ നിന്ന്
ಇಂದು ಮಕ್ಕಳು ಮುಂದೆ ಹಿರಿಯರು
 


ಇಂದು ನಾವು ಶಾಲೆಯಲ್ಲಿ
ಚಿಕ್ಕ ಮಕ್ಕಳು
ನಾಳೆ ನಮ್ಮ ನಾಡಿನಲ್ಲಿ
ನಾವೆ ಹಿರಿಯರು
ಬೆಳಗೆ ಬೇಗ ಏಳುತ
     ಹಲ್ಲು ಮುಖವ ತೊಳೆಯುತ
ದೇವರನ್ನು ನೆನೆಯುವ
    ಓದಿ ಬರೆದು ನಲಿಯುವ
ಓದಿ ಜ್ಞಾನ ಪಡೆಯುವ
         ಬುದ್ಧಿ ಯರಿತು ನಡೆಯುವ
ತಾಯಿ ತಂದೆ ಹಿರಿಯರ
             ಸೇವೆಯನ್ನು ಗೈಯುವ
ಶಿಸ್ತು ನಿಯಮ ಕಲಿಯುವ
            ಸಮಯವರಿತು ನಡೆಯುವ
ಗುರುಗಳನ್ನು ನಮಿಸುವ
              ಕೀರ್ತಿವಂತರಾಗುವ
ನಾವು ಅಣ್ಣ ತಮ್ಮರು
             ಅಕ್ಕ ತಂಗಿಯೆಲ್ಲರೂ
ಕೂಡಿಯಾಡಿ ಕಲಿಯುವ
              ನಾಡಿಗಾಗಿ ದುಡಿಯುವ
ಜಾತಿ ಭೇದ ಮಾಡೆವು
             ಮೇಲು ಕೀಳು ತಿಳಿಯೆವು
ಸುಳ್ಳು ಮೋಸವರಿಯೆವು
             ದೇವರಂತೆ ನಡೆವೆವು
ನಮ್ಮ ನಾಡು ಕನ್ನಡ
             ಜನ್ಮ ಭೂಮಿ ಭಾರತ
ವಿಶ್ವ ಪ್ರೇಮ ಪಡೆವೆವು
             ಸತ್ಯ ನಿಷ್ಠೆ ಮೆರೆವೆವು.
             

YATHIN RAJ
9 B എസ് .ഡി. പി. എച്ച്. എസ്. ധർമ്മത്തടുക്ക
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത

 സാങ്കേതിക പരിശോധന - Nixon C. K. തീയ്യതി: 05/ 05/ 2020 >> രചനാവിഭാഗം - കവിത