ജി.എച്ച്.എസ്. എസ്. ബേകൂർ/അക്ഷരവൃക്ഷം/ Eradu Giligala Kathe

Schoolwiki സംരംഭത്തിൽ നിന്ന്
ಎರಡು ಗಿ ಳಿಗಳ ಕಥೆ

ಎರಡು ಗಿ ಳಿಗಳ ಕಥೆ ಒಂದಾನೊಂದು ಕಾಲದಲ್ಲಿ ಎತ್ತರವಾದ ಮರವೊಂದರ ತುದಿಯಲ್ಲಿ ಒಂದು ಸುಂದರವಾದ ಹೆಣ್ಣು ಗಿಳಿ ವಾಸವಾಗಿತ್ತು. ಅದಕ್ಕೆ ಎರಡು ಪುಟ್ಟ ಅವಳಿ ಜವಳಿ ಗಿಳಿ ಮರಿಗಳಿತ್ತು. ಒಂದು ದಿನ ತಾಯಿ ಗಿಳಿ ಆಹಾರವನ್ನು ಹುಡುಕಿಕೊಂಡು ಆಚೆ ಹೋಗಿದ್ದಾಗ ಒಬ್ಬ ಬೇಟೆಗಾರ ಮರವನ್ನು ಹತ್ತಿ ಗಿಳಿ ಗೂಡನ್ನು ತೆಗೆದು ಕೊಂಡು ಹೋದನು. ಆ ಮರಿಗಳನ್ನು ತನ್ನ ಚೀಲದಲ್ಲಿ ಹಾಕುವಾಗ ಒಂದು ಗಿಳಿಮರಿ ತಪ್ಪಿಸಿಕೊಂಡು ಹಾರಿ ಹೋಗಿತ್ತು. ಇನ್ನೊಂದನ್ನು ಬೇಟೆಗಾರ ತನ್ನ ಮನೆಗೆ ತೆಗೆದುಕೊಂಡು ಹೋದನು. ಅದೇ ದಾರಿಯಲ್ಲಿ ಹೋಗುತಿದ್ದ ಸಾಧು ಒಬ್ಬ ಗಿಳಿ ತಪ್ಪಿಸಿಕೊಂಡದ್ದನ್ನು ನೋಡಿ ಅದನ್ನು ಹಿಡಿದು ತನ್ನ ಆಶ್ರಮಕ್ಕೆ ತೆಗೆದುಕೊಂಡು ಹೋದನು. ಹೀಗೆ ಒಂದು ಗಿಳಿ ಮರಿ ಬೇಟೆಗಾರನ ಕೈಯಾಲ್ಲೂ ಇನ್ನೊಂದು ಗಿಳಿ ಮರಿ ಸಾಧುವಿನ ಕೈಯಾಲ್ಲೂ ಇದ್ದವು. ಒಂದು ದಿನ ಒಬ್ಬ ಮಹಾರಾಜ ಕಾಡಿನ ಮೂಲಕ ಪ್ರಯಾಣ ಹೋಗುತ್ತಿರುವಾಗ ಬೇಟೆಗಾರನ ಮನೆ ನೋಡಿ ತನ್ನ ಕುದುರೆಯನ್ನ ಬೇಟೆಗಾರನ ಮನೆ ಹತ್ತಿರ ನಡೆಸಿದನು. ಇದನ್ನು ನೋಡಿದ ಗಿಳಿ " ನಮ್ಮ ಮನೆಗೆ ಒಬ್ಬ ಮನುಷ್ಯ ಬರುತ್ತಿದ್ದಾನೆ .. ಒಡೆಯ, ನಿನ್ನ ಬಿಲ್ಲು ಬಾಣದಿಂದ ಆತನನ್ನು ಹೊಡೆದು ಸಾಯಿಸು ಬೇಗ " ಎಂದು ಕಿರಿಚಿತು. ಇದು ಮಹಾರಾಜನಿಗೆ ಕೇಳಿಸಿತು. ಹಾಗೆ ಕೂಗಿದ್ದು ಪಂಜರದಲ್ಲಿ ಇದ್ದ ಗಿಳಿ ಎಂದು ರಾಜನಿಗೆ ತಿಳಿಯಿತು. ಆಗ ಮಹಾರಾಜ " ಛೆ! ಇದೆಂತ ಅಭ್ಯಾಸದ ಪಕ್ಷಿ .. ಆದರೆ ಇದರ ಒಡೆಯ ಹೇಗೆ ಇರಬಹುದು ಎಂದು ಯೋಚಿಸುತ್ತಾ ರಾಜ ತನ್ನ ಪ್ರಯಾಣ ಮುಂದುವರಿಸಿದ. ಹೀಗೆ ಹೋಗುತ್ತಿದ್ದಂತೆ ರಾಜನಿಗೆ ಬಾಯಾರಿಕೆ ಆಯಿತು. ಅಲ್ಲಿ ಹತ್ತಿರದಲ್ಲಿ ಆಶ್ರಮ ಕಂಡಿತು. ಅಲ್ಲಿ ಇಳಿದು ನೀರು ಕುಡಿಯಲು ಹೋದ. ರಾಜನ ಕಣ್ಣಿಗೆ ಪಂಜರದ ಒಳಗೆ ಇರುವ ಗಿಳಿ ಕಾಣಿಸಿತು. ರಾಜನಿಗೆ ಪಕ್ಕನೆ ತಾನು ಮೊದಲು ಕಂಡ ಗಿಳಿಯ ನೆನಪಾಯಿತು. ಈ ಗಿಳಿ ತನ್ನನು ಹೇಗೆ ಹೇಳುತ್ತದೆಯೋ ಎಂದು ರಾಜನಿಗೆ ಸಂಕಟ ಆಗಲಾರಂಭಿಸಿತು. ಆದರೆ ಆ ಗಿಳಿ " ಸುಸ್ವಾಗತ ಮಹಾರಾಜರೇ .. ನಮ್ಮ ಮನೆಗೆ ನಿಮ್ಮನು ಸ್ವಾಗತಿಸುತ್ತೇನೆ.. ಬನ್ನಿ.. ನಿಮ್ಮ ಆಗಮನವು ನಮ್ಮ ತುಂಬಾ ಸಂತೋಷಗೊಳಿಸುತ್ತದೆ" ಎಂದು ಮಹಾರಾಜನನ್ನು ಹೊಗಳಲು ಆರಂಭಿಸುತ್ತದೆ. ಇದನ್ನು ಕೇಳಿ ರಾಜನಿಗೆ ತುಂಬಾ ಸಂತೋಷವಾಯಿತು. ಬೇಟೆಗಾರನ ಮನೆಯಲ್ಲಿ ನೋಡಿದ ಗಿಳಿಯು ಇಲ್ಲಿಯು ಕಂಡ ಗಿಳಿಯ ಬಗ್ಗೆ ಆಲೋಚಿಸುತ್ತಾನೆ. ಬೇಟೆಗಾರನ ಮನೆಯಲ್ಲಿ ದುಷ್ಟತನ ಮನಸ್ಸು ಹೊಂದಿದ್ದ ಗಿಳಿ ಹಾಗೂ ಎಲ್ಲಿ ಸಾಧು ಮನಸ್ಸನ್ನು ಹೊಂದಿದ್ದ ಗಿಳಿ ಎಂದು ಮಹಾರಾಜನು ತನ್ನಲ್ಲೆ ಗುಣುಗುಟ್ಟುತಿದ್ದ. ರಾಜನು ಗಿಳಿಯತ್ತ ಹೋಗಿ " ಮುದ್ದಿನ ಗಿಳಿಯೇ ನಿನ್ನಂತ ಸ್ನೇಹಪರವಾದ ಪಕ್ಷಿಯನ್ನು ನೋಡಿ ನನಗೆ ತುಂಬಾ ಸಂತೋಷವಾಗುತ್ತಿದೆ. ನಿನ್ನಂತ ಇನ್ನೊಂದು ಪಕ್ಷಿಯನ್ನು ನಾ ಆಗ ಕಂಡೆ ಆದರೆ ಆ ಪಕ್ಷಿಯ ಮನಸ್ಸು ತುಂಬಾ ಸಂಕುಚಿತ. ಅದು ಮನೆಗೆ ಬಂದ ಅಪರಿಚಿತರನ್ನು ಕೆಟ್ಟದಾಗಿ ನುಡಿಯುತ್ತದೆ " ಎಂದ. ಇದನ್ನು ಕೇಳಿ ಗಿಳಿ "ಅದು ಬೇಟೆಗಾರನ ಬಳಿ ಇತ್ತೇ..?" ಕೇಳಿತು. ಆಗ ಮಹಾರಾಜ " ಹೌದು ಬೇಟೆಗಾರನ ಬಳಿ ಇರುವ ಗಿಳಿ. ಅದು ನಿನಗೆ ಹೇಗೆ ತಿಳಿಯಿತು? ಎಂದು ರಾಜ ಪ್ರಶ್ನಿಸಿದ. ಆ ಸಮಯ ಗಿಳಿ ಕಣ್ಣೀರು ಸುರಿಸುತ್ತಾ "ಅವನು ನನ್ನ ಪ್ರೀತಿಯ ಸಹೋದರ ನಾವಿಬ್ಬರು ಒಂದೇ ಗೂಡಲ್ಲಿ ಇದ್ದೆವು. ನಮ್ಮ ಅಮ್ಮ ಒಂದು ದಿನ ಆಹಾರಕ್ಕಾಗಿ ಹೊರಗೆ ಹೋದಾಗ ನಮ್ಮನು ಬೇಟೆಗಾರ ಹಿಡಿದು ಕೊಂಡು ಹೋದ.. ಆದರೆ ನಾ ಅವನ ಕೈಯಿಂದ ತಪ್ಪಿಸಿ ಕೊಂಡೆ ಆದರೆ ನನ್ನ ಸಹೋದರನಿಗೆ ಅವನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೇಟೆಗಾರ ತುಂಬಾ ನೀಚನಾದ್ದರಿಂದ ನನ್ನ ಸಹೋದರನ ಸ್ವಭಾವ ಅದೇ ರೀತಿಯಾಗಿಹೋಯಿತು. ಆದರೆ ನನ್ನ ಒಡೆಯ ತುಂಬಾ ವಿಭಿನ್ನ , ಉತ್ತಮ ಪಾತ್ರದಾರಿ ಆದ್ದರಿಂದ ನನ್ನ ಸ್ವಭಾವವು ಈ ರೀತಿ ಆಯಿತು" ಎಂದು ರಾಜನ ಬಳಿ ಗಿಳಿ ಹೇಳಿತು. ಗಿಳಿಯ ಮಾತಿನಿಂದ ಸಂತೋಷ ಗೊಂಡ ರಾಜ ಆ ಗಿಳಿ ಅವನ ಒಡೆಯ ಮತ್ತು ಆಶ್ರಮವನ್ನು ಹೊಗಳುತ್ತಾ ಅಲ್ಲಿಂದ ಹೊರಬಂದನು.

" ಒಳ್ಳೆಯವರ ಸಹವಾಸದಿಂದ ಒಳ್ಳೆಯತನವೇ ಕಂಡುಬರುತ್ತದೆ "


ಚಿತ್ರ ೧೦ ಎ


Chitra A
10 A ജി.എച്ച്.എസ്. എസ്. ബേകൂർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ